ಬೆಂಗಳೂರು : ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು, 1 ಲೀ.ಹಾಲಿಗೆ ಪ್ರೋತ್ಸಾಹಧನ 7 ರೂಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ. ಸದ್ಯ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹಧನವನ್ನ 7 ರೂಗೆ ಹೆಚ್ಚಳ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.
ಬಜೆಟ್ ನಲ್ಲಿ ಘೋಷಿಸದೇ 30 ಹೊಸ ಕಾರ್ಯಕ್ರಮಗಳನ್ನ ಜಾರಿಗೆ ತರಲಾಗಿದೆ. ಪ್ರಣಾಳಿಕೆಯಲ್ಲಿನ 593 ಭರವಸೆಗಳ ಪೈಕಿ 293 ಭರವಸೆಗಳನ್ನ ಈಡೇರಿಸಲಾಗಿದೆ. ಉಳಿದ ಭರವಸೆಗಳನ್ನ ಮುಂದಿನ ದಿನದಲ್ಲಿ ಈಡೇರಿಸಲಾಗುವುದು ಎಂದರು.

