HomeLatest Newsಐಪಿಎಲ್ ಹರಾಜು 2026: ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು!

ಐಪಿಎಲ್ ಹರಾಜು 2026: ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು!

ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಆಡಲಿರುವ ಆಟಗಾರರ ಹರಾಜಿನ ಸಮಯ ಮತ್ತೆ ಬಂದಿದೆ. ಐಪಿಎಲ್ 2026 ರ ಮಿನಿ ಹರಾಜು ಮಂಗಳವಾರ ಅಬುಧಾಬಿಯ ಎತಿಹಾಡ್ ಅರೆನಾದಲ್ಲಿ ನಡೆಯಲಿದೆ. 2024ರ ಮೆಗಾ ಹರಾಜಿನ ನಂತರ ಇದೇ ಮೊದಲ ಮಿನಿ ಹರಾಜು ಆಗಿದ್ದು, ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಖರೀದಿಸಲು ಸಜ್ಜಾಗಿವೆ.

ಹಲವು ತಂಡಗಳು ದೊಡ್ಡ ಮೊತ್ತದ ಹಣದೊಂದಿಗೆ ಹರಾಜಿಗೆ ಪ್ರವೇಶಿಸಿದ್ದರೆ, ಇನ್ನು ಕೆಲವು ತಂಡಗಳ ಬಳಿ ಖರ್ಚು ಮಾಡಲು ಅತಿ ಕಡಿಮೆ ಹಣ ಉಳಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಖಾತೆಯಲ್ಲಿ ಗರಿಷ್ಠ ₹64.30 ಕೋಟಿ ಇದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ₹43.40 ಕೋಟಿ ಬಜೆಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ, ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಬಳಿ ಕೇವಲ ₹2.75 ಕೋಟಿ ಮಾತ್ರ ಉಳಿದಿದೆ.

ದಾಖಲೆ ಬೆಲೆಗೆ ಮಾರಾಟವಾದ ಕ್ಯಾಮರೂನ್ ಗ್ರೀನ್

ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಅವರಿಗೆ ದಾಖಲೆಯ ಬೇಡಿಕೆ ವ್ಯಕ್ತವಾಗಿದೆ. ಬಿಡ್ಡಿಂಗ್ ಸಮರದ ನಂತರ, ಕ್ಯಾಮರೂನ್ ಗ್ರೀನ್ ₹25.20 ಕೋಟಿ ಬೃಹತ್ ಮೊತ್ತಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಿನಿ ಹರಾಜಿನಲ್ಲಿ ಭಾರತದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸೇರಿದಂತೆ ಇನ್ನಷ್ಟು ಪ್ರಮುಖ ಆಟಗಾರರು ಸಹ ಭಾರಿ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಇದು ಮಿನಿ ಹರಾಜು ಆಗಿದ್ದರೂ, ಐಪಿಎಲ್ ಹರಾಜು ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಿಡ್‌ಗಳಿಗೆ ಸಾಕ್ಷಿಯಾಗುವ ಸಾಧ್ಯತೆಯನ್ನು ಈ ವರ್ಷದ ಹರಾಜು ಹೊಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular