HomeLatest Newsವಿಚಿತ್ರ ವಿದ್ಯಮಾನ: ಟರ್ಕಿಯ ಕೃಷಿಭೂಮಿ ಕೊನ್ಯಾ ಬಯಲಿನಲ್ಲಿ ನೂರಾರು ಬೃಹತ್ ಗುಂಡಿಗಳು ಪ್ರತ್ಯಕ್ಷ!

ವಿಚಿತ್ರ ವಿದ್ಯಮಾನ: ಟರ್ಕಿಯ ಕೃಷಿಭೂಮಿ ಕೊನ್ಯಾ ಬಯಲಿನಲ್ಲಿ ನೂರಾರು ಬೃಹತ್ ಗುಂಡಿಗಳು ಪ್ರತ್ಯಕ್ಷ!

ಟರ್ಕಿಯ ಧಾನ್ಯದ ಕಣಜ ಎಂದೇ ಹೆಸರಾದ ಕೊನ್ಯಾ ಬಯಲು ಪ್ರಸ್ತುತ ಒಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಟರ್ಕಿಯ ಒಟ್ಟು ಕೃಷಿ ಭೂಮಿಯ ಶೇ. 11.2 ರಷ್ಟನ್ನು ಹೊಂದಿರುವ ಈ ಪ್ರದೇಶದಲ್ಲಿ ಅತಿಯಾದ ಉತ್ಪಾದನೆ ಮತ್ತು ಅನಿಯಂತ್ರಿತ ಭೂಗತ ಜಲದ ಬಳಕೆಯಿಂದಾಗಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ.

ಈ ಬರ ಪರಿಸ್ಥಿತಿಯಿಂದಾಗಿ ಕೃಷಿ ಭೂಮಿಗಳಲ್ಲಿ ನೂರಾರು ಬೃಹತ್ ಸಿಂಕ್‌ಹೋಲ್‌ಗಳು (ಭೂಕುಸಿತದ ಗುಂಡಿಗಳು) ರೂಪುಗೊಳ್ಳುತ್ತಿದ್ದು, ರೈತರ ಹೊಲಗಳನ್ನು ಹಾಳು ಮಾಡುತ್ತಿವೆ.

ಗುಂಡಿಗಳ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ: ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ಎಎಫ್‌ಎಡಿ (AFAD) ಯ ಇತ್ತೀಚಿನ ವರದಿಯ ಪ್ರಕಾರ, ಕೊನ್ಯಾ ಜಲಾನಯನ ಪ್ರದೇಶದಲ್ಲಿ ಇದುವರೆಗೆ 684 ಸಿಂಕ್‌ಹೋಲ್‌ಗಳನ್ನು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಸಿಂಕ್‌ಹೋಲ್ ಸಂಶೋಧನಾ ಕೇಂದ್ರದ ಮಾಹಿತಿಯಂತೆ, 2017 ರಲ್ಲಿ ಕೇವಲ 299 ಇದ್ದ ಈ ಗುಂಡಿಗಳ ಸಂಖ್ಯೆ 2021 ರ ವೇಳೆಗೆ 2,550 ಕ್ಕೆ ಏರಿಕೆಯಾಗಿದೆ. 2025 ರಲ್ಲಿ ಸುಮಾರು 20 ಹೊಸ ಬೃಹತ್ ಸಿಂಕ್‌ಹೋಲ್‌ಗಳು ರೂಪುಗೊಂಡಿರುವುದು ದೃಢಪಟ್ಟಿದೆ. ಈ ಗುಂಡಿಗಳು 30 ಮೀಟರ್‌ಗಿಂತಲೂ ಹೆಚ್ಚು ಆಳ ಮತ್ತು 100 ಅಡಿ ಅಗಲವನ್ನು ಹೊಂದಿವೆ ಎಂದು ವರದಿಯಾಗಿದೆ.

ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಬಿಕ್ಕಟ್ಟು ಉಲ್ಬಣ: ಈ ಬಿಕ್ಕಟ್ಟು ಏಕಾಏಕಿ ಉದ್ಭವಿಸಿಲ್ಲ, ಬದಲಿಗೆ ಕಳೆದ 20 ವರ್ಷಗಳಲ್ಲಿ ರೈತರು ಮತ್ತು ಆಡಳಿತದ ನಿರ್ಲಕ್ಷ್ಯದಿಂದಾಗಿ ಕ್ರಮೇಣ ಬಿಗಡಾಯಿಸಿದೆ. 2025 ರಲ್ಲಿ ಬರ ಮತ್ತು ಭೂಗತ ನೀರಿನ ಸವಕಳಿ ಗಣನೀಯವಾಗಿ ಹೆಚ್ಚಾದ ಕಾರಣ ಸಮಸ್ಯೆ ತೀವ್ರಗೊಂಡಿದೆ. ಎಎಫ್‌ಎಡಿ ವರದಿಯ ಪ್ರಕಾರ, ಕರಾಪಿನಾರ್ ಜಿಲ್ಲೆಯೊಂದರಲ್ಲೇ 534 ಸಿಂಕ್‌ಹೋಲ್‌ಗಳು ಕಂಡುಬಂದಿದ್ದು, ಅವು ಹೆಚ್ಚಾಗಿ ಗ್ರಾಮೀಣ ಮತ್ತು ಕೃಷಿ ಪ್ರದೇಶಗಳಲ್ಲಿವೆ.

ಇದು ಮಾನವ ನಿರ್ಮಿತ ದುರಂತವಾಗಿದ್ದು, ನಿರ್ಲಕ್ಷ್ಯದಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular