ಕಲಬುರಗಿ: ಜಿಲ್ಲೆಯ ಆಳಂದ ಮತ್ತು ಅಫಜಲಪೂರ ತಾಲ್ಲೂಕಿನ ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸುವ ಯೋಜನೆಯನ್ನು ಬುಡಕಟ್ಟು ಸಮುದಾಯ/ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಮೀನುಮಾರಾಟಕ್ಕಾಗಿ ಐಸ್ ಬಾಕ್ಸನೊಂದಿಗೆ ದ್ವೀಚಕ್ರ ವಾಹನ, ಐಸ್ ಬಾಕ್ಸನೊಂದಿಗೆ ತ್ರಿಚಕ್ರ ವಾಹನ ಮತ್ತು ಜೀವಂತ ಮೀನು ಮಾರಾಟ ಘಟಕಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಳಂದ ಮತ್ತು ಅಫಜಲಪೂರ ತಾಲ್ಲೂಕಿನಲ್ಲಿ ಬರುವ ಗ್ರಾಮಗಳಾದ ನಸೀರವಾಡಿ, ಶಕಾಪೂರ ಗ್ರಾಮದ ಅರ್ಹ ಮೀನುಗಾರ ಫಲಾನುಭವಿಗಳು ಹಾಗೂ ಅಫಜಲಪೂರ ತಾಲ್ಲೂಕಿನ ಗ್ರಾಮಗಳಾದ ಮಣ್ಣೂರ, ಶಿರವಾಡ, ಬಳ್ಳೂರ್ಗಿ, ಹವಳಗಾ, ಕೊಗನೂರ, ವಡ್ಡಳ್ಳಿ, ಇಂಗಳಗಿ(ಬಿ), ಅವರಾದ, ದೇವಲಗಾಣಗಾಪೂರ, ಚೌಡಾಪೂರ, ಗೊಬ್ಬುರ (ಬಿ)ಹಾಗೂ ಹಾವನೂರ ಗ್ರಾಮಗಳ ಆಸಕ್ತ ಮೀನುಗಾರರು ಅರ್ಜಿ ಸಲ್ಲಿಸಬೇಕೆಂದು ತಿಳಿಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕಲಬುರಗಿ, ಶಂಕರ ಗೊಂದಳಿ ಮೊ:8861097281 ಅವರನ್ನು ಸಂಪರ್ಕಿಸಬಹುದು.ಡಿ. 8 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, 23 ರಂದು ಕೊನೆ ದಿನವಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

