HomeLive NewsSHOCKING: ಕಣ್ಣಾಮುಚ್ಚಾಲೆ ಆಟವಾಡುವಾಗ ನಾಪತ್ತೆಯಾಗಿದ್ದ ಬಾಲಕ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆ

SHOCKING: ಕಣ್ಣಾಮುಚ್ಚಾಲೆ ಆಟವಾಡುವಾಗ ನಾಪತ್ತೆಯಾಗಿದ್ದ ಬಾಲಕ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆ

ಮುಂಬೈ: ಮಕ್ಕಳು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕನೊಬ್ಬ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್ ದಲ್ಲಿ ನಡೆದಿದೆ.

8 ವರ್ಷದ ಬಾಲಕ ವಸತಿ ಕಟ್ಟಡದ ನೀರಿನ ಟ್ಯಾಂಕ್ ನಲ್ಲಿ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಇದು ಆಕಸ್ಮಿಕವಾದ ಸಾವೋ ಅಥವಾ ಕೊಲೆಯೋ ಎಂಬುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.

ಬಾಲಕ ತನ್ನ ಪೋಷಕರೊಂದಿಗೆ ನೆಲಸೋಪಾರಾ ಟಕಿಪಾಡಾ ಪ್ರದೇಶದ ಕರಾರಿ ಬಾಗ್ ನಲ್ಲಿ ವಾಸವಾಗಿದ್ದ. ಡ್ಸೆಂಬರ್ ೩ರಂದು ಶಾಲೆಯಿಂದ ಬಂದವನು ಆಟವಾಡಲೆಂದು ಹೊರಗೆ ಹೋಗಿದ್ದ. ಬಳಿಕ ಮನೆಗೆ ವಾಪಾಸ್ ಆಗಿಲ್ಲ. ಡಿ.೪ರಂದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ಹುಡುಕಾಟ ನಡೆಸಿದಾಗ ಪೊಲೀಸರಿಗೆ ಬಾಲಕನ ಶವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೆಹ್ರಾಜ್ ಮೃತ ಬಾಲಕ. ಟ್ಯಾಂಕ್ ಓಪನ್ ಆಗಿ ಇತ್ತು. ಅದರಲ್ಲಿ ಬಾಲಕನ ಶವ ಪತ್ತೆಯಾಗಿದೆ. ಆಟವಾಡುವಾಗ ಅಡಗಿಕೊಳ್ಳಲು ಬಂದಾಗ ಕಾಲು ಜಾರಿ ಬಾಲಕ ಬಿದ್ದಿರಬಹುದು ಎಂದು ಶಂಕುಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular