ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದು ಕಾಂಗ್ರೆಸ್ ಮುಖಂಡ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಮಿಥುನ್ ಬಂಧಿತ ಆರೋಪಿ. ಗಣೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬಜರಂಗದಳ ಕಾರ್ಯಕರ್ತ ಮಿಥುನ್ ಭಾಗಿಯಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಿಥುನನನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ರಾತ್ರಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದು ಈ ವೇಳೆ ಕಾಂಗ್ರೆಸ್ ಮುಖಂಡ ಗಣೇಶ್ ಎಂಬಾತನನ್ನು ದುಷ್ಕರ್ಮಿಗಳು ಬರಬರವಾಗಿ ಹತ್ಯೆ ಮಾಡಿದ್ದರು. ಗಲಾಟೆ ವೇಳೆ ಪ್ರಮುಖ ಆರೋಪಿಗಳಾಗಿರುವ ಸಂಜಯ್ ಹಾಗೂ ನಾಗಭೂಷಣ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಮೂವರು ಆರೋಪಿಗಳಾದ ನಿತಿನ್, ದರ್ಶನ್, ಅಜಯ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಇದೀಗ ಆರನೇ ಆರೋಪಿ ಮಿಥುನ್ ನನ್ನು ಬಂಧಿಸಲಾಗಿದೆ. ಮಿಥುನ್ ಎ1 ಆರೋಪಿ ಸಂಜಯ್ ಸ್ನೇಹಿತ ಎಂದು ತಿಳಿದುಬಂದಿದೆ.
