ಉಡುಪಿ: ಅಪರಿಚಿತ ನಂಬರ್ ನಿಂದ ವಾಟ್ಸಾಪ್ ಗೆ ಬಂದ ಫೈಲ್ ಅನ್ನು ಡೌನ್ಲೋಡ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಖಾತೆಯಿಂದ 10.70 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಉಡುಪಿಯ ಕರಂಬಳ್ಳಿಯ ಕಮಲನಾಭ ಬಾಯರಿ(57) ವಂಚನೆಗೆ ಒಳಗಾದವರು. ಅವರ ವಾಟ್ಸಾಪ್ ನಂಬರ್ ಗೆ ಡಿಸೆಂಬರ್ 4 ಮತ್ತು 5 ರಂದು ಅಪರಿಚಿತ ಸಂಖ್ಯೆಯಿಂದ ಎಪಿಕೆ ಫೈಲ್ ಬಂದಿದೆ. ಅದನ್ನು ಕಮಲನಾಭ ಅವರು ಡೌನ್ಲೋಡ್ ಮಾಡಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 10.70 ಲಕ್ಷ ರೂ. ಕಡಿತವಾಗಿದೆ. ಘಟನೆಯ ಬಗ್ಗೆ ಅವರು ದೂರು ನೀಡಿದ್ದು, ಉಡುಪಿಯ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
