ಬಾಗಲಕೋಟೆ: ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಬಾರದು ಎಂದು ‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಮಾತನಾಡಿದ ಅವರು ದೈವದ ಬಗ್ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಪಮಾನ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ದೈವರಾದನೆ ಅಂದರೆ ಅದರದ್ದೇ ಆದ ಸಂಪ್ರದಾಯ, ಆಚರಣೆ ಇರುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದಲ್ಲ, ಎಲ್ಲಿಯೇ ಆಗಲಿ ಸಂಪ್ರದಾಯ ವಿಷಯ ಬಂದಾಗ ತನ್ನದೇ ಆದ ರೀತಿ ನೀತಿಗಳು ಇರುತ್ತವೆ. ಅದನ್ನು ನಂಬುವವರ ಮನಸ್ಸಿಗೆ ಧಕ್ಕೆ ಮಾಡಬಾರದು ಎಂದು ಹೇಳಿದ್ದಾರೆ.
ಯಾವುದೇ ವ್ಯಕ್ತಿಗೆ ಆಗಲಿ, ಸಂಘಕ್ಕೆ ಆಗಲಿ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು. ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡು ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.
