ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾದ ಬೆನ್ನಲ್ಲೇ ಇತರ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಮನಬಂದಂತೆ ಟಿಕೆಟ್ ದರ ವಸೂಲಿಗೆ ಇಳಿದಿದ್ದು, ಏರ್ ಲೈನ್ಸ್ ಗಳ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ವಿಮಾನಯಾನ ಸಂಸ್ಥೆಗಳ ದುಪ್ಪಟ್ಟು ಟಿಕೆಟ್ ದರ ಲೂಟಿಗೆ ಕೇಂದ್ರ ಸರ್ಕಾರ ತಡೆ ನೀಡಿದ್ದು, ಏಕರೂಪ ಟಿಕೆಟ್ ದರ ನಿಗದಿ ಮಾಡಿದೆ. ಇಂಡಿಗೋ ಹಾರಾಟದಲ್ಲಿ ವ್ಯತ್ಯಯವುಂಟಾದ ಬೆನ್ನಲ್ಲೇ ಏರ್ ಲೈನ್ಸ್ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್ ದರದಲ್ಲಿ ಭಾರಿ ಏರಿಕೆ ಮಾಡಿದ್ದವು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನಯಾನ ಸಂಸ್ಥೆಗಳಿಗೆ ಏಕರೂಪ ದರ ನಿಗದಿ ಮಾಡಿದೆ.
500 ಕಿ.ಮೀಗೆ 7500 ರೂ ದರ ನಿಗದಿ. 500-1000 ಕಿ.ಮೀಗೆ 12,000 ರೂ ದರ ನಿಗದಿ. 1000-1500 ಕಿ.ಮೀಗಳಿಗೆ 15,000 ನಿಗದಿ. 1500 ಕಿ.ಮೀ ಮೇಲ್ಪಟ್ಟು 18,000 ರೂ ದರ ನಿಗದಿ ಮಾಡಿದೆ ಎಂದು ತಿಳಿದುಬಂದಿದೆ.
