ಬೆಂಗಳೂರು : ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿನ ಪಬ್ ನಲ್ಲಿ ಮಿಡಲ್ ಫಿಂಗರ್ ತೋರಿಸಿ ದುರ್ವತನೆ ಮೆರೆದಿದ್ದು, ಈ ಸಂಬಂಧ ಕೇಸ್ ದಾಖಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ದೂರು ದಾಖಲಿಸಿದ್ದಾರೆ.. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರಿಗೆ ದೂರು ನೀಡಿದ್ದಾರೆ. ಆರ್ಯನ್ ಖಾನ್ ಜೊತೆ ಪಬ್ನಲ್ಲಿ ಇದ್ದವರನ್ನೂ ವಿಚಾರಣೆ ನಡೆಸುವಂತೆ ವಕೀಲರು ದೂರು ನೀಡಿದ್ದಾರೆ.
ಪಬ್ ನಲ್ಲಿ ಮಿಡಲ್ ಫಿಂಗರ್ ತೋರಿಸಿ ಸಾರ್ವಜನಿಕವಾಗಿ ದುರ್ವರ್ತನೆ ತೋರಿದ್ದು, ವಿವಾದಕ್ಕೆ ಕಾರಣವಾಗಿದೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳತ್ತ ಕೈ ಬೀಸುವಾಗ ಶಾರೂಖ್ ಖಾನ್ ಪುತ್ರ ಮಿಡಲ್ ಫಿಂಗರ್ ತೋರಿಸುವಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 28 ರಂದು ಈ ಘಟನೆ ನಡೆದಿದೆ . ಆರ್ಯನ್ ಖಾನ್ ಜೊತೆ ಜೈದ್ ಖಾನ್, ಮೊಹಮದ್ ನಲಪಾಡ್ ಕೂಡ ಇದ್ದರು.
ಅಸಭ್ಯವಾಗಿ ಕೈ ಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತೂ ಜನರಿಗಲ್ಲ : ನಟ ಝೈದ್ ಖಾನ್ ಸ್ಪಷ್ಟನೆ
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬೆಂಗಳೂರಿನ ಪಬ್ ವೊಂದರ ಬಾಲ್ಕನಿಯಲ್ಲಿ ನಿಂತು ಆಸಭ್ಯವಾಗಿ ಕೈ ಬೆರಳು ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.ಆರ್ಯನ್ ಖಾನ್ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈ ಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತೂ ಜನರಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಲ್ಟ್’ ಚಿತ್ರದ ಪ್ರಚಾರಕ್ಕಾಗಿ ಹೊಸಪೇಟೆಗೆ ಆಗಮಿಸಿದ್ದ ಝೈದ್ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಹಾಗೆ ಕೈ ಬೆರಳು ತೋರಿಸಿದರೆ ಖಂಡಿತ ಆರ್ಯನ್ ಖಾನ್ ಕೂಡ ಸುಮ್ಮನಿರುವುದಿಲ್ಲ. ಜನಜಂಗುಳಿ ನಿವಾರಿಸಲು ಕಳುಹಿಸಿದ್ದ ಸ್ನೇಹಿತ ಇನ್ನೂ ಬಂದಿರಲಿಲ್ಲ. ಬಾಲ್ಕನಿಯಲ್ಲಿ ನಿಂತ ವೇಳೆ ಆತನನ್ನು ಕಂಡಾಗ ಆರ್ಯನ್ ಖಾನ್ ಕೈ ಬೆರಳು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
