HomeLatest NewsBIG NEWS: ಮಾದಕ ವಸ್ತುಗಳು ಪತ್ತೆ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಅರೆಸ್ಟ್

BIG NEWS: ಮಾದಕ ವಸ್ತುಗಳು ಪತ್ತೆ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಅರೆಸ್ಟ್

ಬೆಂಗಳೂರು: ಕರ್ತವ್ಯ ನಿರತ ಜೈಲಿನ ವಾರ್ಡರ್ ಬಳಿ ಮಾದಕ ವಸ್ತುಗಳು ಪತ್ತೆಯಾದ ಕಾರಣಕ್ಕೆ ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ಪಾಟೀಲ್ ಬಂಧಿತ ವಾರ್ಡರ್. ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ ವಾರ್ಡರ್ ರಾಹುಲ್ ಪಾಟೀಲ್ ಬಳಿ ಸಿಗರೇಟ್ ಪ್ಯಾಕ್, ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಶುಕ್ರವಾರ ಎಂದಿನಂತೆ ರಾಹುಲ್ ಪಾಟೀಲ್ ಕರ್ತವ್ಯಕ್ಕೆ ಬಂದಿದ್ದರು. ಪರಪ್ಪನ ಅಗ್ರಹಾರ ಜೈಲಿನ ಮುಖ್ಯದ್ವಾರದಲ್ಲಿ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ ರಾಹುಲ್ ಪಾಟೀಲ್ ಬಳಿ 2 ಸಿಗರೇಟ್ ಪ್ಯಾಕ್, 60 ಗ್ರಾಂ ಮಾದಕ ವಸ್ತುಗಳು ಪತ್ತೆಯಾಗಿವೆ. ಕೆ ಎಸ್ ಇ ಎಸ್ ಎಫ್ ಸಿಬ್ಬಂದಿ ಈ ಬಗ್ಗೆ ಜೈಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲು ಅಧೀಕ್ಷಕ ಪರಮೇಶ್ ಅವರ ದೂರು ಹಿನ್ನೆಲೆಯಲ್ಲಿ ರಾಹುಲ್ ಪಾಟೀಲ್ ನನ್ನು ಬಂಧಿಸಲಾಗಿದೆ. ರಾಹುಲ್ ಪಟೇಲ್ ಈ ಹಿಂದೆ ಬೆಳಗಾವಿ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಜೂನ್ ನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular