HomeLatest Newsರೆಪೊ ದರ ಇಳಿಕೆ ಬೆನ್ನಲ್ಲೇ ಬಡ್ಡಿ ದರ ಇಳಿಸಿದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ:...

ರೆಪೊ ದರ ಇಳಿಕೆ ಬೆನ್ನಲ್ಲೇ ಬಡ್ಡಿ ದರ ಇಳಿಸಿದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ: ಇಂದಿನಿಂದಲೇ ಪರಿಷ್ಕೃತ ದರ ಅನ್ವಯ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು ಶೇಕಡ 0.25 ರಷ್ಟು ಕಡಿಮೆ ಮಾಡಿದೆ. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಇತರೆ ಸಾಲಗಳ ಮೇಲಿನ ಬಡ್ಡಿಯ ಹೊರೆ ತುಸು ಕಡಿಮೆಯಾಗಲಿದೆ.

ರೆಪೊ ದರ ಕಡಿತಗೊಳಿಸುವ ತೀರ್ಮಾನವನ್ನು ಆರ್‌ಬಿಐ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ(BOB) ರೆಪೊ ದರಕ್ಕೆ ಹೊಂದಿಕೊಂಡ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.25 ರಷ್ಟು ಕಡಿತ ಮಾಡುವುದಾಗಿ ತಿಳಿಸಿದೆ.

ಬ್ಯಾಂಕ್ ಆಫ್ ಬರೋಡ ಈ ತೀರ್ಮಾನದಿಂದ ರೆಪೊ ದರಕ್ಕೆ ಹೊಂದಿಕೊಂಡ ಸಾಲದ ಮೇಲಿನ ಬಡ್ಡಿ ದರ ಶೇಕಡ 8.15 ರಿಂದ ಶೇಕಡ 7.90ಕ್ಕೆ ಇಳಿಕೆಯಾಗಲಿದೆ. ಡಿಸೆಂಬರ್ 6ರಿಂದಲೇ ಪರಿಷ್ಕೃತ ಬಡ್ಡಿ ದರ ಅನ್ವಯವಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular