ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗೆ ಚಲನಚಿತ್ರಗಳ ಆಹ್ವಾನ

ಕರ್ನಾಟಕ ಚಲನಚಿತ್ರ ಅಕಾಡೆಮಿಯು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾಗವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗೆ ಚಲನಚಿತ್ರಗಳನ್ನು ಆಹ್ವಾನಿಸಿದೆ.

2025ರ ಜನವರಿ 29ರಿಂದ ಫೆಬ್ರುವರಿ 6ರವರೆಗೆ ಚಲನಚಿತ್ರೋತ್ಸವವು ನಡೆಯಲಿದೆ. 2025ರ ಜನವರಿ 1ರಿಂದ 2025ರ ಡಿಸೆಂಬರ್ 31ರ ಒಳಗೆ ತಯಾರಾಗಿರುವ ಚಲನಚಿತ್ರಗಳನ್ನು ಸ್ಪರ್ಧೆಗೆ ಸಲ್ಲಿಸಬಹುದಾಗಿದೆ. ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಪ್ರಮಾಣ ಪತ್ರದಲ್ಲಿ ನಮೂದಿಸುವ ದಿನಾಂಕವನ್ನೇ ನಿರ್ಮಾಣದ ದಿನಾಂಕ ಎಂದು ಪರಿಗಣಿಸಲಾಗುತ್ತದೆ.

ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಡಿಸೆಂಬರ್ 31ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಚಲನಚಿತ್ರೋತ್ಸವ ಜಾಲತಾಣ http://biffes.org, ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮೂರು ವಿಭಾಗಗಳ ಸ್ಪರ್ಧೆ:

1.ಕನ್ನಡ ಸಿನಿಮಾ ವಿಭಾಗ: ಕನ್ನಡ ಮತ್ತು ಕರ್ನಾಟಕದ ಯಾವುದೇ ಉಪಭಾಷೆಯ ಸಿನಿಮಾವನ್ನು ಈ ವಿಭಾಗದಲ್ಲಿ ಸಲ್ಲಿಸಬಹುದಾಗಿದೆ

2. ಚಿತ್ರಭಾರತಿ ವಿಭಾಗ: ಭಾರತದ ಯಾವುದೇ ಭಾಷೆ ಮತ್ತು ಉಪಭಾಷೆಯಲ್ಲಿ ನಿರ್ಮಾಣವಾದ ಸಿನಿಮಾಗಳು ಈ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹವಾಗಿರುತ್ತವೆ

3. ಏಷ್ಯಾ ಸಿನಿಮಾ ವಿಭಾಗ: ಏಷ್ಯಾದ ಯಾವುದೇ ದೇಶ ಮತ್ತು ಏಷ್ಯಾದ ಭಾಷೆಯಲ್ಲಿ ನಿರ್ಮಿಸಲಾದ ಚಿತ್ರಗಳನ್ನು ಸ್ಪರ್ಧೆಗೆ ಸಲ್ಲಿಸಬಹುದು

ಎಲ್ಲ ಸಿನಿಮಾಗಳು ಕನಿಷ್ಠ 70 ನಿಮಿಷಗಳ ಅವಧಿಯದ್ದಾಗಿರಬೇಕು.

ಹೆಚ್ಚಿನ ಮಾಹಿತಿಗೆ 8904645529 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಅಥವಾ biffesblr@gmail.comಗೆ ಇ–ಮೇಲ್‌ ಮಾಡಬಹುದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read