ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿ ಭಾರಿ ಚರ್ಚೆಗೆ ಕಾರಣನಾಗಿದ್ದ ಧರ್ಮಸ್ಥಳ ಬುರುಡೆ ಕೇಸ್ ಪ್ರಕರಣದ ಆರೋಪಿ, ಮಾಸ್ಕ್ ಮ್ಯಾನ್ ಚಿನ್ನಯ್ಯ ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾನೆ.
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಚಿನ್ನಯ್ಯಗೆ ಕೋರ್ಟ್ ಜಾಮೀನು ಮಂಜೂರು ಮಡಿ ಹಲವು ದಿನಗಳು ಕಳೆದಿವೆ. ಆದರೂ ಜೈಲಿನಿಂದ ಹೊರಬರಲಾಗುತ್ತಿಲ್ಲ. ನವೆಂಬರ್ 26ರಂದು ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ಬುರುಡೆ ಚಿನ್ನಯ್ಯಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡುವಂತೆ ಷರತ್ತುಬದ್ಧ ಜಾಮೀನು ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಜಾಮೀನುದಾರರು, ಭದ್ರತೆ ಠೇವಣಿ ಮಾಡದ ಕಾರಣಕ್ಕೆ ಆರೋಪಿ ಚಿನ್ನಯ್ಯ ಇನ್ನೂ ಜೈಲಿನಲ್ಲಿಯೇ ಪರದಾಡುವಂತಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿ ಚಿನ್ನಯ್ಯ ಹೇಳಿಕೆ ನೀಡಿದ್ದ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚನೆ ಅಮಡಿತ್ತು. ತನಿಖಾ ತಂಡ ಧರ್ಮಸ್ಥಳದ ನೇತ್ರಾವತಿ ನದಿ ತೀರ, ಬಂಗ್ಲಗುಡ್ಡ ಸೇರಿದಂತೆ ಆರೋಪಿ ಚಿನ್ನಯ್ಯ ಹೇಳಿದ ಕಡೆಯಲೆಲ್ಲ ಉತ್ಖನನ ಮಾಡಿ ಪರಿಶೀಲನೆ ನಡೆಸಿತ್ತು. ಆದರೆ ಯಾವುದೇ ಅಸ್ಥಿಪಂಜರಗಳಾಗಲಿ, ಶವದ ಕುರುಹುಗಳಾಗಲಿ ಸಿಕ್ಕಿರಲಿಲ್ಲ.
