ಬೆಂಗಳೂರು: ಕಾಂಗ್ರೆಸ್ ನಾಯಕರ ಕುರ್ಚಿ ಕದನವನ್ನು ಬಿಗ್ ಬಾಸ್ ಶೋಗೆ ಹೋಲಿಕೆ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ನಾಯಕರದ್ದು ರಿಯಲ್ ಶೋ, ಅದು ರಿಯಾಲಿಟಿ ಶೋ ಅಷ್ಟೇ ವ್ಯತ್ಯಾಸ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ನಾಯಕರು ಬಿಗ್ ಬಾಸ್ ನಲ್ಲಿ ಜಗಳವಾಡಿದಂತೆ ಜಗಳವಾಡುತ್ತಿದ್ದಾರೆ. ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಭಗವಂತನು ಎಂದು ಡೈಲಾಗ್ ಹೊಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ನಾನು ಯಾರಿಗೂ ಮಾತು ಕೊಟ್ಟೇ ಇಲ್ಲ ಅಂತಿದ್ದಾರೆ. ಮಾತುಕತೆ ಬಿಟ್ಟು ಈಗ ಟ್ವಿಟ್ ವಾರ್ ಗೆ ಬಂದಿದೆ. ಬಿಗ್ ಬಾಸ್ ಶೋನಲ್ಲಿ ಜಗಳ ಮಾಡಿಕೊಂಡಂತೆ ಕಾಂಗ್ರೆಸ್ ನಾಯಕರು ಜಗಳವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದು ಕಾಂಗ್ರೆಸ್ ನ ಬಿಗ್ ಬಾಸ್ ರಿಯಲ್ ಶೋ, ಸೋನಿಯಾ ಗಾಂಧಿ ಇದರ ಪ್ರಾಯಜೋಕರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಇವರೆಲ್ಲರೂ ಪ್ರಾಯೋಜಕರು. ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ವೈಲ್ಡ್ ಕಾರ್ಡ್ ಎಂಟ್ರಿಗೆ ಕಾಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
