HomeLive NewsBREAKING : ಬೆಂಗಳೂರಿನ 'ರಾಮೇಶ್ವರಂ ಕೆಫೆ' ತಿಂಡಿಯಲ್ಲಿ ಹುಳ ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್...

BREAKING : ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ತಿಂಡಿಯಲ್ಲಿ ಹುಳ ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ : ಮಾಲೀಕರ ವಿರುದ್ಧ FIR ದಾಖಲು.!


ಬೆಂಗಳೂರು : ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಹುಳು ಪತ್ತೆ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಾಲೀಕರ ವಿರುದ್ಧವೇ FIR ದಾಖಲು ದಾಖಲಾಗಿದೆ.

ಹೌದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರು, ಮ್ಯಾನೇಜರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸಮಂತ್ ವಿರುದ್ಧ ಸುಳ್ಲು ದೂರು ನೀಡಿ, ಮಾನಹಾನಿ ಮಾಡಿದ ಆರೋಪದಡಿ ಎಫ್ ಐ ಅರ್ ದಾಖಲಾಗಿದೆ.

ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆಯಾಗಿತ್ತು. ಈ ಬಗ್ಗೆ ಯುವಕರು ವಿಡಿಯೋ ಮಾಡಿದ್ದರು. ಇದೇ ವೇಳೆ ಕೆಫೆಗೆ ಹಣಕ್ಕೆ ಬೇಡಿಕೆ ಇಟ್ಟು ಕರೆಯೊಂದು ಬಂದಿತ್ತು. ವಿಡಿಯೋ ಮಾಡಿದ್ದ ಯುವಕರೇ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಕೆಫೆ ಮಾಲೀಕರು ದೂರು ನೀಡಿದ್ದರು. ಆದರೆ ವಿಡಿಯೋ ಇಟ್ಟುಕೊಂಡು ಇನ್ನೋರ್ವ ಬ್ಲ್ಯಾಕ್ ಮೇಲ್ ಮಾಡಿದ್ದ. ಈ ಪ್ರಕರಣ ವಯ್ಯಾಲಿಕಾವಲ್ ಠಾಣೆಗೆ ವರ್ಗಾವಣೆಯಾಗಿತ್ತು.
ತನಿಖೆ ವೇಳೆ ವಿಡಿಯೋ ಮಾಡಿದ್ದ ಯುವಕರು ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂಬುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದ್ದ ಯುವಕ, ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಏರ್ ಪೋರ್ಟ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular