ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ವಾರ್ಷಿಕ ಯಾತ್ರೆಯ ಮೊದಲ 15 ದಿನದಲ್ಲಿ ಹುಂಡಿಯಲ್ಲಿ 92 ಕೋಟಿ ರೂ. ಸಂಗ್ರಹವಾಗಿದೆ.
ದೇಗುಲದ ಆಡಳಿತ ಮಂಡಳಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 69 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಶೇಕಡ 33 ರಷ್ಟು ಹೆಚ್ಚಳವಾಗಿದ್ದು, 92 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದಲ್ಲಿ ಸಂಗ್ರಹವಾಗಿರುವುದಕ್ಕಿಂತ 23 ಕೋಟಿ ರೂ. ಹೆಚ್ಚಳವಾಗಿದೆ. ಆರವಣ ಪ್ರಸಾದ ಮಾರಾಟದಿಂದ 47 ಕೋಟಿ ರೂ. ಸಂಗ್ರಹವಾಗಿದೆ. ಯಾತ್ರೆ ಆರಂಭವಾದಾಗಿನಿಂದ ನ. 30ರವರೆಗೆ 1.3 ಮಿಲಿಯನ್ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.
