ಶಿವಮೊಗ್ಗ : ‘KSRTC’ ಬಸ್ ನ ಕೆಳಭಾಗದಲ್ಲಿ ನಾಡಬಾಂಬ್ ಸ್ಪೋಟಗೊಂಡಿದ್ದು, ಭಾರಿ ದುರಂತ ತಪ್ಪಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಬಸ್ ನಲ್ಲಿ 45 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿದೆ. ರಸ್ತೆಯಲ್ಲಿ ಬಿದ್ದಿದ್ದ ನಾಡಬಾಂಬ್ ಚಕ್ರದಡಿ ಸಿಲುಕಿ ಸ್ಪೋಟಗೊಂಡಿದೆ.
ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಟ್ರಾನ್ಸ್ ಫಾರ್ಮ್ ಗೆ ಡಿಕ್ಕಿ ಹೊಡೆದು ನಿಂತಿದೆ. ಯಾರಾದ್ರೂ ಉದ್ದೇಶಪೂರ್ವಕವಾಗಿ ನಾಡಬಾಂಬ್ ಇಟ್ಟಿದ್ರೋ ಅಥವಾ ಯಾರೋ ಒಯ್ಯುವಾಗ ಬೀಳಿಸರಬಹುದೇ ಎಂಬುದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಗೆ ಚಾಲಕ ಮಾಹಿತಿ ನೀಡಿದ್ದಾರೆ.
