ನವದೆಹಲಿ: ಮೊಬೈಲ್ ನಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಬೇರೆಯವರ ಆಧಾರ್ ಕಾರ್ಡ್ ಬಳಸಿಕೊಂಡು ಅಕ್ರಮವಾಗಿ ಸಿಮ್ ಖರೀದಿ, ಮೊಬೈಲ್ ಕಳ್ಳತನ, ಪ್ರತಿ ಮೊಬೈಲ್ ನೀಡಲಾಗುವ ಅಂತರಾಷ್ಟ್ರೀಯ ಮೊಬೈಲ್ ಗುರುತಿನ ಸಂಖ್ಯೆ(ಐಎಂಇಐ) ನಕಲು ಮಾಡುವುದು ಸೇರಿದಂತೆ ಹಲವು ವಂಚನೆಗಳಿಂದ ಜನರನ್ನು ರಕ್ಷಿಸಲು ಎಲ್ಲಾ ಮೊಬೈಲ್ ಗಳಲ್ಲಿ ಸಂಚಾರ ಸಾಥಿ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ದೇಶದ ಎಲ್ಲ ಮೊಬೈಲ್ ತಯಾರಕರಿಗೆ, ಮೊಬೈಲ್ ಸೆಟ್ ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ದೂರ ಸಂಪರ್ಕ ಸಚಿವಾಲಯವು ಕೆಲವು ನಿರ್ದೇಶನಗಳನ್ನು ನೀಡಿ ಆದೇಶ ಹೊರಡಿಸಿದೆ.
ದೇಶದಲ್ಲಿ ತಯಾರಾಗುವ ಮತ್ತು ಆಮದು ಮಾಡಿಕೊಳ್ಳಲಾಗುವ ಎಲ್ಲಾ ಮೊಬೈಲ್ ಗಳಲ್ಲಿಯೂ ಸಂಚಾರ ಸಾಥಿ ಆ್ಯಪ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಬೈಲ್ ಗಳಲ್ಲಿ ಮೊದಲ ಸಾಫ್ಟ್ವೇರ್ ಅಪ್ಡೇಟ್ ವೇಳೆ ಈ ಅಪ್ಲಿಕೇಶನ್ ಬಳಕೆದಾರರಿಗೆ ನೀಡಬೇಕು ಎಂದು ತಿಳಿಸಲಾಗಿದೆ.
