HomeLatest NewsBREAKING: ಹೂಡಿಕೆ ಹೆಸರಲ್ಲಿ ಬರೋಬ್ಬರಿ 3.27 ಕೋಟಿ ರೂ. ವಂಚನೆ

BREAKING: ಹೂಡಿಕೆ ಹೆಸರಲ್ಲಿ ಬರೋಬ್ಬರಿ 3.27 ಕೋಟಿ ರೂ. ವಂಚನೆ

ಚಿಕ್ಕಮಗಳೂರು: ಹೂಡಿಕೆ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 3.27 ಕೋಟಿ ರೂ. ವಂಚಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದ ಶಂಕರ್ ನಟರಾಜನ್ ಅವರು ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟಿ ಹೆಸರಲ್ಲಿ ವಾಟ್ಸಪ್ ನಲ್ಲಿ ಬಂದ ಲೋಗೋ ನಂಬಿ 3.27 ಕೋಟಿ ಹಣ ಕಳೆದುಕೊಂಡಿದ್ದಾರೆ.

ನೀವು ಹೂಡಿಕೆ ಮಾಡಿದ ಹಣಕ್ಕೆ ಲಾಭ ಬಂದಿದ್ದು, ನಿಮ್ಮ ಖಾತೆಯಲ್ಲಿ 9 ಕೋಟಿ ರೂ. ಇದೆ. ಅದನ್ನು ಪಡೆದುಕೊಳ್ಳಲು 1.09 ಕೋಟಿ ರೂ. ಕಮಿಷನ್ ಜಮಾ ಮಾಡುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ನಂತರ ಹಂತ ಹಂತವಾಗಿ 3.27 ಕೋಟಿ ರೂ. ಜಮಾ ಮಾಡಿಸಿಕೊಂಡಿದ್ದು, ಕೊನೆಗೆ ಅನುಮಾನಗೊಂಡ ಶಂಕರ್ ನಟರಾಜನ್ ಅವರು ಮುಂಬೈ ಇಂಡಿಯನ್ ಸ್ಟಾಕ್ ರಿಲಯನ್ಸ್ ಕೇಂದ್ರ ಕಚೇರಿಗೆ ತೆರಳಿ ಪರಿಶೀಲಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular