ಉಡುಪಿ: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಆಗಮಿಸಲಿದ್ದು, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಎಲ್ಲೆಡೆ ಸಂಭ್ರಮ-ಸಡಗರ ಮನೆ ಮಾಡಿದೆ.
ಉಡುಪಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಮರಳು ಶಿಲ್ಪ ಕಲಾವಿದರು ಪ್ರಧಾನಿ ಮೋದಿಯವರ ಬೃಹತ್ ಮರಳು ಕಲಾಕೃತಿ ರಚಿಸಿದ್ದರೆ. ಕಲಾವಿದರ ಕೈಚಳಕ ಕಣ್ಮನ ಸೆಳೆಯುತ್ತಿದೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ವಿಶೇಷ ಮರಳಿನ ಕಲಾಕೃತಿ ರಚನೆ ಮಾಡಿದ್ದಾರೆ. ಸ್ಯಾಂಡ್ ಥೀಮ್ ಕಲಾವಿದರಿಂದ ಮರಳು ಶಿಲ್ಪ ರಚಿಸಿದ್ದು, ಕಡಗೋಲು ಕೃಷ್ಣನ ಜೊತೆ ಪ್ರಧಾನಿ ಮೋದಿಯವರ ಚಿತ್ರ ರಚಿಸಲಾಗಿದೆ. ಕಲಾವಿದ ಹರೀಶ್ ಸಾಗ ಹಾಗೂ ತಂಡದವರಿಂದ ಈ ಮರಳು ಕಲಾಕೃತಿ ರಚಿಸಲಾಗಿದೆ.
