HomeLatest NewsBREAKING : ಕಾರು ಅಪಘಾತದಲ್ಲಿ 'IAS' ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಕೇಸ್ : ಚಾಲಕನ...

BREAKING : ಕಾರು ಅಪಘಾತದಲ್ಲಿ ‘IAS’ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಕೇಸ್ : ಚಾಲಕನ ವಿರುದ್ಧ ‘FIR’ ದಾಖಲು

ಕಲಬುರಗಿ : ಭೀಕರ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದಿಂದ ವಾಹನ ಚಾಲನೆ ಎಂದು ಮಹಾಂತೇಶ್ ಸಂಬಂಧಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಅರೋಕಿಯಾ ಅಂಥೋನಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ಬೈಪಾಸ್ ಬಳಿ ಅವರು ಇನೋವಾ ಕಾರ್ ಅಪಘಾತಕ್ಕೀಡಾಗಿದೆ. ಮಹಾಂತೇಶ್ ಬಿಳಗಿ ಪ್ರಯಾಣಿಸುತ್ತಿದ್ದ ಕಾರ್ ನಲ್ಲಿದ್ದ ಐದು ಜನರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ, ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮಹಾಂತೇಶ್ ಬಿಳಗಿ ಅವರು ಜನಾನುರಾಗಿಯಾಗಿದ್ದರು. ಬೆಸ್ಕಾಂ ಎಂಡಿಯಾಗಿ ಕಾರ್ಯ ನಿರ್ವಹಿಸಿದ್ದರು. ಖನಿಜ ನಿಗಮದ ಎಂಡಿಯಾಗಿದ್ದರು. ಸಂಬಂಧಿಕರ ಮದುವೆಗಾಗಿ ಕಲಬುರಗಿಗೆ ತೆರಳುತ್ತಿದ್ದಾಗ ಕಾರ್ ಅಪಘಾತಕ್ಕೀಡಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular