HomeLatest NewsBREAKING : 'ಮುರುಘಾ ಶ್ರೀ' ವಿರುದ್ಧ ಪೋಕ್ಸೋ ಕೇಸ್ : ಇಂದು ಮಧ್ಯಾಹ್ನ 2:45 ಕ್ಕೆ...

BREAKING : ‘ಮುರುಘಾ ಶ್ರೀ’ ವಿರುದ್ಧ ಪೋಕ್ಸೋ ಕೇಸ್ : ಇಂದು ಮಧ್ಯಾಹ್ನ 2:45 ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್.!

ಚಿತ್ರದುರ್ಗ : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 2:45 ಕ್ಕೆ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಮುರುಘಾಶ್ರೀಗೆ ಜೈಲೋ ಅಥವಾ ಜಾಮೀನೋ ಎಂಬುದು ಇಂದು ಮಧ್ಯಾಹ್ನ ಕೋರ್ಟ್ ಆದೇಶ ಹೊರಡಿಸಲಿದೆ.

ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ನ್ಯಾಯಮೂರ್ತಿ ಗಂಗಾಧರಪ್ಪ ಚೆನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ. ಸ್ವಾಮೀಜಿ ವಿರುದ್ಧದ ಮೊದಲ ಪೋಕ್ಸೊ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದೆ.

ಎ1 ಮುರುಘಾ ಶರಣರು, ಎ2 ವಾರ್ಡನ್ ರಶ್ಮಿ, ಎ5 ಮಠದ ಮ್ಯಾನೇಜರ್ ಪರಮಶಿವಯ್ಯ ಇಂದು ಕೋರ್ಟ್ ಗೆ ಹಾಜರಾಗಿದ್ದು, . ಆರೋಪಿತರಲ್ಲಿ ಎ3 ಬಸವಾದಿತ್ಯ ಮತ್ತು ಎ5 ವಕೀಲ ಗಂಗಾಧರಯ್ಯ ಅವರನ್ನು ಚಾರ್ಜ್ ಶೀಟ್ ನಿಂದ ಕೈಬಿಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದುರ್ಗದ ಮುರುಘಾರಾಜೇಂದ್ರ ಬ್ರಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿತ್ತು.ನಂತರ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ವಿದ್ಯಾರ್ಥಿ ನಿಲಯದಲ್ಲಿರುವ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನವಾಗಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular