ಬೆಂಗಳೂರು: ಬಿಎಂಟಿಸಿ ಇವಿ ಬಸ್ ಚಾಲನೆ ವೇಳೆ ಚಾಲಕರು ಇನ್ಮುಂದೆ ಮೊಬೈಲ್ ಫೋನ್ ಗಳನ್ನು ಬಳಸುವಂತಿಲ್ಲ. ಚಾಲಕರು ಮೊಬೈಲ್ ಬಳಸದಂತೆ ಬಿಎಂಟಿಸಿ ಆದೇಶ ಹೊರಡಿಸ್ದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಅಪಘಾತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪಘಾತಕ್ಕೆ ಚಾಲಕರು ಮೊಬೈಲ್ ಬಳಸುವುದೂ ಕೂಡ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಮೊಬೈಲ್, ಡಿಜಿಟಲ್ ಗ್ಯಾಜೆಟ್ಸ್, ಬ್ಲೂಟೂತ್, ಇಯರ್ ಫೋನ್ ಗಳನ್ನು ಬಳಸುವಂತಿಲ್ಲ.
ಸಂಗೀತ ಕೇಳುವುದು, ಆಡಿಯೋ ಸೌಂಡ್ ಗಳನ್ನು ಹಾಕುವುದು, ಚಾಅಟಿಂಗ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಬಿಎಂಟಿಸಿ ಆದೇಶದಲ್ಲಿ ತಿಳಿಸಿದೆ. ನಿಯಮ ಉಲ್ಲಂಘಿಸಿದರೆ ಡ್ರೈವರ್ ಗಳು ಮಾತ್ರವಲ್ಲ ಕಂಡಕ್ಟರ್ ಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಿಎಂಟಿಸಿ ಭದ್ರತಾ ಹಾಗೂ ಜಾಗೃತ ನಿರ್ದೇಶಕರು ಎಲ್ಲಾ ಡಿಪೋ ಮ್ಯಾನೇಜರ್ ಗಳಿಗೂ ತಿಳುವಳಿಗೆ ನೀಡುವಂತೆ ಪತ್ರ ಬರೆದಿದ್ದಾರೆ.
