ನವದೆಹಲಿ: ಆಫಿಕಾದ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಹೊರಹೊಮ್ಮಿದ ಪರಿಣಾಮ ದಟ್ಟ ಹೊಗೆ ಆವರಿಸುತ್ತಿದೆ. ಭಾರತದತ್ತಲೂ ಹೊಗೆ ಹೆಚ್ಚುತ್ತಿದ್ದು, ವಿಮಾನ ಸಂಚರದಲ್ಲಿ ವ್ಯತ್ಯಯವುಂಟಾಗಿದೆ.
ಜ್ವಾಲಾಮುಖಿಯ ದಟ್ಟ ಹೊಗೆ ಭಾರತದ ವಿಮಾನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಮುನ್ನೆಚ್ಚರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಯಲಯಕ್ಕೆ ಸೂಚನೆ ನೀಡಿದೆ.
ಸಂಭಾವ್ಯ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ವಿಮಾನ ಸಂಸ್ಥೆಗಳು ವಿಮಾನ ಹಾರಾಟವನ್ನು ರದ್ದುಗೊಳಿಸಿವೆ. ಇದರಿಂದಾಗಿ ವಿಮಾನಯಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಇಥಿಯೋಪಿಯಾದಲ್ಲಿ ಹೈಲಿಗುಬ್ಬಿ ಜ್ವಾಲಾಮುಖಿ ಸ್ಫೋಟದ ಪರಿಣಾಮ ದಟ್ಟವಾದ ಹೊಗೆ, ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ವಿಮಾನಗಳ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗಿದೆ. ದಟ್ಟ ಹೊಗೆ ಭಾರತದ ಪಶ್ಚಿಮ ಭಾಗದತ್ತ ತೇಲುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಹಿನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಕಾಶ್ ಏರ್, ಇಂಡಿಗೋ, ಕೆ ಎಲ್ ಎಂ ವಿಮಾನ ಸಂಸ್ಥೆಗಳು ವಿಮಾನ ರದ್ದುಗೊಳಿಸಿವೆ.
