HomeLatest NewsBREAKING: ರಾಜ್ಯದಲ್ಲಿ ಮತ್ತೊಂದು ಮಹಾ ದರೋಡೆ: ಇಡಿ ಅಧಿಕಾರಿಗಳು ಎಂದು ಬೆದರಿಸಿ 3 ಕೋಟಿಗೂ ಅಧಿಕ...

BREAKING: ರಾಜ್ಯದಲ್ಲಿ ಮತ್ತೊಂದು ಮಹಾ ದರೋಡೆ: ಇಡಿ ಅಧಿಕಾರಿಗಳು ಎಂದು ಬೆದರಿಸಿ 3 ಕೋಟಿಗೂ ಅಧಿಕ ಚಿನ್ನಾಭರಣ, ಹಣ ಲೂಟಿ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ 7.11 ಕೋಟಿ ದರೋಡೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ನಿಮ್ಮ ಅಂಗಡಿ ಮೇಲೆ ರೇಡ್ ಆಗಿದೆ ಎಂದು ಬೆದರಿಸಿ 3 ಕೋಟಿಗೂ ಅಧಿಕ ಚಿನ್ನಾಭರಣ, ಹಣ ಲೂಟಿ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿರುವ ಚಿನಾಭರಣ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಕೇರಳ ಮೂಲದ ಚಿನ್ನದ ವ್ಯಾಪಾರಿ ಎಂ.ಆರ್.ಸುದೀನ್ ಎಂಬುವವರಿಗೆ ವಂಚಿಸಿ ನಕಲಿ ಇಡಿ ಅಧಿಕಾರಿಗಳು ಚಿನ್ನಾಭರಣ, ಹಣದ ಜೊತೆಗೆ ಪರಾರಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಗುರುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ಎಂದು ಬಂದಿದ್ದ ಐವರ ಗ್ಯಾಂಗ್, ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ದೋಚಿ ವಂಚಕರು ಎಸ್ಕೇಪ್ ಆಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular