ಮತದಾರರ ಪಟ್ಟಿ ಪರಿಷ್ಕರಣೆ: ಸಿಕ್ಕಿ ಬೀಳುವ ಭಯದಲ್ಲಿ ಸಾವಿರಾರು ಬಾಂಗ್ಲಾ ಅಕ್ರಮ ವಲಸಿಗರು ಪಲಾಯನ…!

ಹಕೀಂಪುರ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಆರಂಭವಾಗಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಕ್ರಮವಾಗಿ ಬೀಡುಬಿಟ್ಟಿದ್ದ ಬಾಂಗ್ಲಾದೇಶದ ವಲಸಿಗರನ್ನು ಇದು ಆತಂಕಕ್ಕೀಡು ಮಾಡಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ತಮ್ಮ ತವರಿನತ್ತ ಪಲಾಯನ ಮಾಡತೊಡಗಿದ್ದಾರೆ. ಕಳೆದ ಆರು ದಿನಗಳಲ್ಲಿ 1200ಕ್ಕೂ ಅಧಿಕ ವಲಸಿಗರು ಬಾಂಗ್ಲಾದೇಶಕ್ಕೆ ಮರಳಿದ್ದಾರೆ.

ಬಂಗಾಳದ ಉತ್ತರ 24 ಪರಗಣ ಜಿಲ್ಲೆ ಗಡಿಯಲ್ಲಿ ರಾತ್ರಿ ವೇಳೆ ಸಾವಿರಾರು ಅಕ್ರಮ ವಲಸಿಗರು ಬಾಂಗ್ಲಾಕ್ಕೆ ಹಿಂತಿರುಗುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣಿ ಶುರುಮಾಡಿದೆ. ಮತದಾರರು ಸ್ಥಳೀಯರು ಹೌದೇ ಅಥವಾ ಅಕ್ರಮ ವಲಸಿಗರೇ ಎಂದು ಪರಿಷ್ಕರಣೆಯ ವೇಳೆ ಪರಿಶೀಲಿಸಲಾಗುತ್ತಿದೆ. ಬಂಗಾಳದಲ್ಲಿ ವಾಸವಾಗಲು ಹಣ ಕೊಟ್ಟು ಅಕ್ರಮವಾಗಿ ದಾಖಲೆ ಪಡೆದಿದ್ದ ಬಾಂಗ್ಲಾ ವಂಚಕರ ಇಂತಹ ನಕಲಿ ದಾಖಲೆಗಳನ್ನು ಚುನಾವಣಾ ಸಿಬ್ಬಂದಿ ಪತ್ತೆ ಮಾಡುತ್ತಿದ್ದು, ಪತ್ತೆಯಾದವರನ್ನು ಸೆರೆಹಿಡಿಯುತ್ತಿದ್ದಾರೆ. ಹೀಗಾಗಿ ಬಂದನ ಭೀತಿಯಿಂದ ಬಾಂಗ್ಲಾದ ಅಕ್ರಮ ವಲಸಿಗರು ಸ್ವದೇಶಕ್ಕೆ ಮರಳಲು ಆರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read