ಬೆಂಗಳೂರು : ಗಂಡನನ್ನ ಬಿಟ್ಟು ಮಗಳು ತವರಿಗೆ ಬಂದಿದ್ದಕ್ಕೆ ಸಿಟ್ಟಾದ ತಾಯಿ ಮಗಳನ್ನ ಮಚ್ಚಿನಿಂದ ಕೊಚ್ಚಿದ ಘಟನೆ ಬೆಂಗಳೂರಿನ ಅಗ್ರಹಾರ ಲೇಔಟ್ ನಲ್ಲಿ ನಡೆದಿದೆ.
ಪುತ್ರಿ ರಮ್ಯಾ ಕುತ್ತಿಗೆಗೆ ತಾಯಿ ಸುಜಾತಾ ಮಚ್ಚಿನಿಂದ ಹಲ್ಲೆ ನಡೆಸಿದ್ದು, ರಮ್ಯಾ ಕುತ್ತಿಗೆ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. 22 ವರ್ಷದ ರಮ್ಯಾ ತಾಯಿಯಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಮ್ಯಾ ತನ್ನ ಗಂಡನ ಮನೆಯಲ್ಲಿ ಜಗಳ ವಾಡಿ ಗಂಡನನ್ನ ಬಿಟ್ಟು ತವರಿಗೆ ವಾಪಸ್ ಆಗುತ್ತಾಳೆ.
ಇದರಿಂದ ರೊಚ್ಚಿಗೆದ್ದ ತಾಯಿ ಸುಜಾತಾ ರಮ್ಯಾಳನ್ನ ತರಾಟೆಗೆ ತೆಗೆದುಕೊಳ್ಳುತ್ತಾನೆ. ನಂತರ ಸಿಕ್ಕ ಮಚ್ಚಿನಿಂದ ರಮ್ಯಾ ಕುತ್ತಿಗೆಗೆ ಮೇಲೆ ಭೀಕರವಾದ ದಾಳಿ ಮಾಡುತ್ತಾರೆ. ಊರ ದೇವಸ್ಥಾನದ ಮುಂದೆ ತಾಯಿ ತನ್ನ ಮಗಳ ನೆತ್ತರು ಚೆಲ್ಲಾಡಿದ್ದಾಳೆ. ಹಲ್ಲೆ ನಡೆಸಿದ ಬಳಿಕ ಸರೋಜಮ್ಮ ಎಸ್ಕೇಪ್ ಆಗಿದ್ದು, ಪೊಲೀಸರು ಆಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ.
