ಕೋಲಾರ: ಕೃಷಿ ಜಮೀನಿನ ಹೆಸರಲ್ಲಿ ಬೋನಾಫೈಡ್ ನಕಲಿ ಪ್ರಮಾಣ ಪತ್ರ ವಿತರಣೆ ಹಾಗೂ ಟ್ರ್ಯಾಕ್ಟರ್ ನೋಂದಣಿ ಪ್ರಕರಣ ಸಂಬಂಧ ಕೋಲಾರದ 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲಾರದ ಐದು ಕಡೆ ಹಾಗೂ ಚಿಂತಾಮಣಿಯಲ್ಲಿ ಒಂದುಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ಸಂಬಂಧವಿಲ್ಲದ ಮಾಲೀಕರ ಕೃಷಿ ಜಮೀನಿನ ಹೆಸರಲ್ಲಿ ಸುಮಾರು 1,387 ನಕಲಿ ಬೋನಾಫೈಡ್ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಕೋಟಿ ನಷ್ಟ ಮಾಡಿದ್ದಾರೆ ಎಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.
ನರಸಾಪುರ ನಾಡಕಚೇರಿ ಉಪ ತಹಶಿಲ್ದಾರ್ ನಾರಾಯಣಸ್ವಾಮಿ, ಹೊರಗುತ್ತಿಗೆ ಆಪರೇಟರ್ ಅಂಬುಜಾ, ಮಧ್ಯವರ್ತಿ ಮಂಜುನಾಥ್, ಚಿಂತಾಮಣಿಯ ಸಾಯಿ ಆದಿತ್ಯ ಟ್ರ್ಯಾಕ್ಟರ್ ಷೋರೂಂ ಸೇಲ್ಸ್ ಮ್ಯಾನ್ ಗೋಕುಲ ರೆಡ್ಡಿ, ವ್ಯವಸ್ಥಾಪಕ ಆಂಜನೇಯ ರೆಡ್ಡಿ, ಆರ್ ಟಿಒ ಮಧ್ಯವರ್ತಿ ಅಶ್ವತ್ಥನಾರಾಯಣ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
