ಬೆಂಗಳೂರು : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಚಾಲಕರ ನಡುವೆ ಗಲಾಟೆ ನಡೆದಿದ್ದು, ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ವೈರಲ್ ಆಗಿದೆ.ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಧ್ಯಪ್ರವೇಶಿಸಿ ದಾಳಿಯನ್ನ ತಪ್ಪಿಸಿದ್ದಾರೆ.
ನವೆಂಬರ್ 16, 2025 ರಂದು ಈ ಘಟನೆ ನಡೆದಿದೆ. ಸೊಹೈಲ್ ಅಹ್ಮದ್ ಎಂಬ ವ್ಯಕ್ತಿ ಟರ್ಮಿನಲ್ 1 ರ ಎಂಟ್ರಿ ಲೇನ್ ಬಳಿ ಚಾಕುವನ್ನು ಹಿಡಿದುಕೊಂಡು ಇಬ್ಬರು ಕ್ಯಾಬ್ ಚಾಲಕರ ಕಡೆಗೆ ಓಡುತ್ತಿರುವುದು ಕಂಡುಬಂದಿತು.
ಕರ್ತವ್ಯದಲ್ಲಿದ್ದ ಎಎಸ್ಐ/ಎಕ್ಸ್ಇ ಸುನಿಲ್ ಕುಮಾರ್ ಮತ್ತು ಇಬ್ಬರು ಸಿಐಎಸ್ಎಫ್ ಅಧಿಕಾರಿಗಳು ಮಧ್ಯಪ್ರವೇಶಿಸಿ, ದಾಳಿಕೋರನನ್ನು ತಡೆದು ಆಯುಧವನ್ನು ವಶಪಡಿಸಿಕೊಂಡರು. ಪ್ರಾಥಮಿಕ ತನಿಖೆಯ ಪ್ರಕಾರ ಟ್ಯಾಕ್ಸಿ ಚಾಲಕರಾದ ಜಗದೀಶ್ ಜೆ.ಆರ್. ಮತ್ತು ರೇಣು ಕುಮಾರ್ ನಡುವೆ ಗಲಾಟೆ ನಡೆದಿದೆ.
Timely intervention by CISF, averted a major crime at Bengaluru Airport.
— CISF (@CISFHQrs) November 17, 2025
Around midnight on 16 Nov, a man armed with a long metal knife charged toward two taxi drivers at the T1 Arrival area of @BLRAirport. ASI/Exe Sunil Kumar & team acted swiftly, overpowered the attacker and… pic.twitter.com/upFWXEtTaW
