HomeLatest NewsSHOCKING: ಜಮೀನಿನಲ್ಲಿ ಟ್ರ್ಯಾಕ್ಟರ್ ರೋಟೋವೇಟರ್ ಗೆ ಸಿಲುಕಿ ರೈತನ ತಲೆ, ದೇಹ ಛಿದ್ರ

SHOCKING: ಜಮೀನಿನಲ್ಲಿ ಟ್ರ್ಯಾಕ್ಟರ್ ರೋಟೋವೇಟರ್ ಗೆ ಸಿಲುಕಿ ರೈತನ ತಲೆ, ದೇಹ ಛಿದ್ರ

ದಾವಣಗೆರೆ: ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ರೈತ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿದ್ಗಿಗೆ ಗ್ರಾಮದಲ್ಲಿ ನಡೆದಿದೆ.

30 ವರ್ಷದ ನಾರಪ್ಪ ಮೃತಪಟ್ಟ ರೈತ. ರೋಟೋವೇಟರ್ ಯಂತ್ರಕ್ಕೆ ಸಿಲುಕಿದ ನಾರಪ್ಪನ ತಲೆ ಭಾಗ, ದೇಹ ಛಿದ್ರವಾಗಿದೆ. ಜಮೀನು ಉಳುಮೆ ಮಾಡಲು ರೋಟೋವೇಟರ್ ಯಂತ್ರ ಅಳವಡಿಸಿದ್ದ ಟ್ರ್ಯಾಕ್ಟರ್ ಬಾಡಿಗೆ ಪಡೆಯಲಾಗಿತ್ತು. ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ನಾರಪ್ಪ ಆಕಸ್ಮಿಕವಾಗಿ ರೋಟೋವೇಟರ್ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular