ಸೌದಿ ಅರೇಬಿಯಾ : ಮದೀನಾದಲ್ಲಿ ಬಸ್ –ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ 42 ಭಾರತೀಯ ಯಾತ್ರಾರ್ಥಿಗಳು ಸಾವನಪ್ಪಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ.
ಮದೀನಾ ಬಳಿ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್ ಮೂಲದ 42 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ.
ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯುತ್ತಿದ್ದ ಪ್ರಯಾಣಿಕರ ಬಸ್ ಡೀಸೆಲ್ ಟ್ಯಾಂಕ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿದ್ದು, ಕನಿಷ್ಠ 42 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಮುಫ್ರಿಹತ್ ಎಂದು ಗುರುತಿಸಲಾದ ಸ್ಥಳದಲ್ಲಿ ಭಾರತೀಯ ಕಾಲಮಾನ ಬೆಳಗಿನ ಜಾವ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮೂಲಗಳ ಪ್ರಕಾರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಬಲಿಯಾದವರು ಹೈದರಾಬಾದ್ನವರು. ದುರಂತದ ಸಮಯದಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಬಸ್ನಲ್ಲಿದ್ದರು ಎಂದು ಆರಂಭಿಕ ಮಾಹಿತಿ ಸೂಚಿಸುತ್ತದೆ. ಮೆಕ್ಕಾದಲ್ಲಿ ತಮ್ಮ ಧಾರ್ಮಿಕ ವಿಧಿಗಳನ್ನು ಮುಗಿಸಿದ ನಂತರ ಹೈದರಾಬಾದ್ ಯಾತ್ರಿಕರು ಮದೀನಾಕ್ಕೆ ತೆರಳುತ್ತಿದ್ದರು. ಡಿಕ್ಕಿ ಸಂಭವಿಸಿದಾಗ ಅನೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು ಎಂದು ವರದಿಯಾಗಿದೆ.
Tragic, reportedly 42 Indian Umrah Pilgrims, maximum from #Hyderabad , feared dead in #BusFire, who were travelling from Makkah (Mecca) to #Madinah (#Medina) on a bus that caught #fire, reportedly after collided with diesel tanker near Mufrihat, #SaudiArabia .
— Surya Reddy (@jsuryareddy) November 17, 2025
Telangana Chief… pic.twitter.com/ZVpUvVLASd
