ಚಾಮರಾಜನಗರ: ಚಾರಣಕ್ಕೆ ತೆರಳಿದ್ದ ವ್ಯಕ್ತಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ನಾಗಮಲೆಗೆ ಭಾನುವಾರ ಚಾರಣಕ್ಕೆ ತೆರಳಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗಾಣಗಾಹಸೂರಿನ ಜವರೇಗೌಡ(65) ಮೃತಪಟ್ಟವರು.
ಮಲೆ ಮಹದೇಶ್ವರ ಬೆಟ್ಟದಿಂದ ತಾಳಬೆಟ್ಟಕ್ಕೆ ಚಾರಣ ಕೈಗೊಂಡಿದ್ದ ಅವರು ಮಾರ್ಗ ಮಧ್ಯದಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ಜತೆಯಲ್ಲಿದ್ದವರು ಜವರೇಗೌಡ ಅವರನ್ನು ಹೆಗಲ ಮೇಲೆ ಹೊತ್ತು ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಈ ವೇಳೆಗಾಗಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
You Might Also Like
TAGGED:ಚಾರಣ
