ಮಂಗಳೂರು: ಊಟಕ್ಕೆಂದು ಪಿಜಿಯಿಂದ ಹೊರಗೆ ಹೋಗಿದ್ದ ಕಾಲೇಜು ವಿದ್ಯಾರ್ಥಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯಲ್ಲಿ ನಡೆದಿದೆ.
ಮಲಿಕ್ ಅಬೂಬಕರ್ ನಾಪತ್ತೆಯಾಗಿರುವ ವಿದ್ಯಾರ್ಥಿ. ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್ ವೈಎಸ್ ಶಿಕ್ಷಣ ಪಡೆಯುತ್ತಿದ್ದ. ಕೇರಳದ ಪಲಕ್ಕಾಡ್ ನಿವಾಸಿಯಾಗಿರುವ ಮಲಿಕ್ ಅಬೂಬಕ್ಕರ್, ದೇರಳಕಟ್ಟೆ ಬಳಿ ಅಬ್ದುಲ್ ಶರೀಫ್ ಎಂಬುವವರ ಪಿಜಿಯಲ್ಲಿ ವಾಸವಾಗಿದ್ದ.
ರಾತ್ರಿ ಊಟಕ್ಕೆಂದು ಪಿಜಿಯಿಂದ ಹೊರ ಹೋಗಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಈವರೆಗೂ ಪಿಜಿಗೆ ವಾಪಾಸ್ ಆಗಿಲ್ಲ. ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
