ಕಾಪು: ಕೌನ್ಸೆಲಿಂಗ್ ಸೆಂಟರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಪ್ತ ಸಮಾಲೋಚಕನನ್ನು ಕಾಪು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಲ್ಲಾರು ಗ್ರಾಮದ ನಿರಂಜನ ಶೇಖರಶೆಟ್ಟಿ(52) ಬಂಧಿತರು. ದಾಂಪತ್ಯ ಸಮಸ್ಯೆ ಕಾರಣದಿಂದ ಮಹಿಳೆಯೊಬ್ಬರು ಕೌನ್ಸೆಲಿಂಗ್ ಬಗ್ಗೆ ಕಾಪು ತಾಲೂಕಿನ ಮೂಳೂರು ಗ್ರಾಮದ ಕಂಕಣಗುತ್ತು ಕಾಂಪೌಂಡ್ ನಲ್ಲಿರುವ ಸುನಂದಾ ವೆಲ್ನೆಸ್ ಸೆಂಟರ್ ಗೆ ಹೋಗಿದ್ದಾರೆ.
ಅಲ್ಲಿ ನಿರಂಜನ ಶೆಟ್ಟಿ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ಮಾಡುವಾಗ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಸಂತ್ರಸ್ತೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
