ಬಳ್ಳಾರಿ: ಸ್ವಪಕ್ಷದ ನಾಯಕನಿಗೇ ಬೆದರಿಕೆ ಹಾಕಿ ಗಣಿ ಅದಿರು ಸಾಗಾಟ ಮಾಡುವರಿಂದ ಹಣಕ್ಕೆ ಬೇದಿಕೆ ಇಟ್ಟಿದ್ದ ಆರೋಪದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪಂಪಾಪತಿ ಗಣಿ ಸಾಗಾಟದಾರರಿಂದ ೪೦ ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ತೋರಣಗಲ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಗಣಿ ಸಾಗಣೆದಾರ ಚಂದ್ರು ಜಿ.ಟಿ.ಪಂಪಾಪತಿ ವಿರುದ್ಧ ಆಡಿಯೋ ಸಮೇತ ದೂರು ನೀಡಿದ್ದಾರೆ. ಚಂದ್ರು ಕೂಡ ಬಿಜೆಪಿ ಮುಖಂಡರಾಗಿದ್ದಾರೆ. ರೌಡಿಶೀಟರ್ ಕೂಡ ಆಗಿರುವ ಪಂಪಾಪತಿ , ಚಂದ್ರು ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಒಂದು ಟನ್ ಅದಿರಿಗೆ ಒಂದು ಸಾವಿರದಂತೆ 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ದಾಖಲಾಗಿದೆ. ಪಂಪಾವತಿ ಹಾಗೂ ಯೂಟ್ಯೂಬ್ ಚಾನಲ್ ನ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
