BREAKING : ಮೈಸೂರಿನಲ್ಲಿ ‘ಹುಲಿ’ ದಾಳಿ ಭೀತಿ : ರೈತರಿಗೆ 10,000 ‘ಮಾನವ ಮಾಸ್ಕ್’ ನೀಡಲು ನಿರ್ಧಾರ.!

ಮೈಸೂರು : ಮೈಸೂರಿನಲ್ಲಿ ಹುಲಿ ದಾಳಿ ಭೀತಿ ರೈತರಲ್ಲಿ ಮನೆ ಮಾಡಿದ್ದು, ಜಮೀನಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ ಎಂದು ಮೈಸೂರು ಡಿಸಿಎಫ್ ಪರಮೇಶ್ ಹೇಳಿದ್ದಾರೆ.

ಆದಷ್ಟು ಬೇಗ ಹುಲಿಗಳ ಸಮಸ್ಯೆ ಬಗೆಹರಿಯಲಿದೆ. ಸಾಕಾನೆಗಳ ಮೂಲಕ , ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪರಮೇಶ್ ಹೇಳಿದ್ದಾರೆ.

ರೈತರಿಗೆ 10 ಸಾವಿರ ಮಾನವ ಮುಖದ ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. ರೈತರು ತಲೆಹಿಂದೆ ಮಾಸ್ಕ್ ಧರಿಸಬೇಕು. ಮಾನವನ ಮೇಲೆ ಹುಳಿ ದಾಳಿ ಮಾಡುವುದು ಬಹಳ ಅಪರೂಪ. ಬಗ್ಗಿ, ಕುಳಿತುಕೊಂಡು ಕೆಲಸ ಮಾಡುವಾಗ ಹುಲಿಗಳು ದಾಳಿ ನಡೆಸುತ್ತದೆ. ಆದ್ದರಿಂದ ರೈತರು ಮಾನವ ಮಾಸ್ಕ್ ಗಳನ್ನು ಹಾಕಿಕೊಳ್ಳಬೇಕು ಎಂದು ಡಿಸಿಎಫ್ ಪರಮೇಶ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read