ಬೆಂಗಳೂರು : ‘ಲಕುಮಿ’ ಸೀರಿಯಲ್ ಖ್ಯಾತಿಯ ನಟಿ ಸುಷ್ಮಾ ಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಹೌದು, ತಮ್ಮ ಗೆಳೆಯನ ಜೊತೆ ನಿಶ್ವಿತಾರ್ಥ ಮಾಡಿಕೊಂಡ ನಟಿ ಸುಷ್ಮಾ ಶೇಖರ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.
ಲಕುಮಿ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಸುಷ್ಮಾ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಾರೇ ನೀ ಮೋಹಿನಿ’ ಎನ್ನುವ ಹಾರರ್ ಸೀರಿಯಲ್ ನಲ್ಲಿ ನಟಿಸಿದ್ದರು. ಅಲ್ಲದೇ ಹಲವು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಸುಷ್ಮಾ ಬಳಿಕ ಓದಿನತ್ತ ಗಮನ ಹರಿಸಿ ಬಿಬಿಎ ಕೋರ್ಸ್ ಮಾಡಿದ್ದರು.
ಇದೀಗ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿಶ್ವಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ಮದುವೆಯಾಗುವ ಹುಡುಗ ಯಾರು..? ಅವರು ಏನು ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಯಾವುದೇ ಗುಟ್ಟನ್ನು ಸುಷ್ಮಾ ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲೇ ಅವರ ಮದುವೆ ಕೂಡ ನೆರವೇರಲಿದೆ.
