ತುಮಕೂರು: ಸಚಿವ ಸ್ಥಾನದಿಂದ ವಜಾಗೊಂಡಿರುವ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಂತಿದೆ. ಮುಂದೆ ನಾನು ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ ಎಂದು ತಿಳಿಸಿದ್ದಾರೆ.
ತುಮಕೂರಿನ ಮಧುಗಿರಿಯ ದೊಡ್ಡೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ರ್ಯಾಲಿ ಮಾಡುತ್ತಿದ್ದರು. ಇತ್ತೀಚಿನ ರ್ಯಾಲಿಗಳಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿಯಲೇ ಇಲ್ಲ. ಅವರಿಗೂ ಕಾಂಗ್ರೆಸ್ ಪಕ್ಷದ ಮೇಲೆ ಬೇಸರ ತರಿಸಿದಂತಿದೆ. ಮುಂದಿನ ದಿನಗಳಲ್ಲಿ ನಾನು ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂದು ತೀರ್ಮಾನಿಸುತ್ತೇನೆ ಎಂದಿದ್ದಾರೆ.
20004 ರಲ್ಲಿ ಕಾಂಗ್ರೆಸ್ ನನ್ನನ್ನು ಗೌರವದಿಂದ ನೋಡಿಕೊಂಡಿರಲಿಲ್ಲ. ಆಗ ನಾನು ಜೆಡಿಎಸ್ ನಿಂದ ಸ್ಪರ್ಧಿಸಿ, ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ವೈಟ್ ವಾಶ್ ಮಾಡಿದ್ದೆವು. ಮುಂದೆ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ವೈಟ್ ವಾಶ್ ಆಗಬಹುದು ಎಂದು ತಿಳಿಸಿದ್ದಾರೆ.
