ಚಿಕ್ಕಬಳ್ಳಾಪುರ : ಪ್ರೀತಿಸಿ ಮದುವೆಯಾಗಿ ಬಂದ ಜೋಡಿಗೆ ಪೋಷಕರು ದೊಡ್ಡ ಶಾಕ್ ನೀಡಿದ್ದಾರೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಏನಿದು ಘಟನೆ..?
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ ಸುಕನ್ಯಾ ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದರು.
ಮದುವೆಯಾಗಿ ಮನೆಗೆ ಬಂದ ಜೋಡಿಗೆ ನೀವಿಬ್ಬರು ಅಣ್ಣ-ತಂಗಿ ಆಗಬೇಕು. ಈ ಮದುವೆಯನ್ನ ನಾವು ಒಪ್ಪಲ್ಲ ಎಂದು ಯುವಕನ ಪೋಷಕರು ಹೇಳಿದ್ದಾರೆ. ನೀವಿಬ್ಬರು ವರಸೆಯಲ್ಲಿ ಅಣ್ಣ ತಂಗಿ ಆಗಬೇಕು. ನಿಮ್ಮ ಮದುವೆಗೆ ನಾವು ಯಾರೂ ಕೂಡ ಒಪ್ಪಲ್ಲ, ಸಂಬಂಧಿಕರು ಬೈದುಕೊಳ್ಳುತ್ತಾರೆ ಎಂದಿದ್ದಾರೆ. ಇದರಿಂದ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆದರೆ ಯುವತಿ ನನಗೆ ಅದೇ ಹುಡುಗ ಬೇಕು, ಅವನಿಲ್ಲದೇ ನಾನು ಬದುಕಲ್ಲ ಎಂದು ಪಟ್ಟು ಹಿಡಿದ್ದಾಳೆ.
