ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಹೊರನಡೆದಿದ್ದಾರೆ. ತಾನು ಬಯಸಿದಂತೆ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಚಂದ್ರಪ್ರಭ ಅವರು ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯಿಂದ ಸೈಲೆಂಟ್ ಆಗಿ ಇದ್ದರು. ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದನ್ನು ನಾವು ನಿರ್ಧರಿಸಲ್ಲ, ಜನರಿಗೆ ಇಷ್ಟ ಆಗಿಲ್ಲ ಅಂದರೆ ಅವರೇ ಕಳುಹಿಸುತ್ತಾರೆ ಎಂದಿದ್ದರು.
ಆದರೆ ಕೊನೆಗೇ ಚಂದ್ರಪ್ರಭಾ ಅವರು ಎಲಿಮಿನೇಟ್ ಆಗಿದ್ದಾರೆ. ಚಂದ್ರಪ್ರಭಾ ಹೊರಗಡೆ ಬರುವಾಗ ಸ್ಪರ್ಧಿ ರಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಚಂದ್ರಪ್ರಭಾ ಏನೂ ಮಾತನಾಡದೇ ಹೊರಗಡೆ ಬಂದಿದ್ದಾರೆ.
