HomeLatest NewsBREAKING: ಯಾವ ಕ್ರಾಂತಿಯೂ ಈಗ ಆಗಲ್ಲ: 2028ಕ್ಕೆ ಕ್ರಾಂತಿಯಾಗುತ್ತೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

BREAKING: ಯಾವ ಕ್ರಾಂತಿಯೂ ಈಗ ಆಗಲ್ಲ: 2028ಕ್ಕೆ ಕ್ರಾಂತಿಯಾಗುತ್ತೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ನವದೆಹಲಿ: ನವೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವ ನವೆಂಬರ್ ಕ್ರಾಂತಿಯೂ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ನಾಯಕರ ಭೇಟಿ ಬಳಿಕ ನವದೆಹಲಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,ಯಾವ ಕ್ರಾಂತಿಯೂ ಈಗ ಆಗಲ್ಲ, ನವೆಂಬರ್ ನಲ್ಲಿಯೂ ಕ್ರಾಂತಿಯಾಗಲ್ಲ, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿಯೂ ಕ್ರಾಂತಿಯಾಗಲ್ಲ. ಕ್ರಾಂತಿಯಾಗುತ್ತದೆ, ಯಾವಾಗ 2028ರ ಚುನಾವಣೆಯಲ್ಲಿ ಕ್ರಾಂತಿಯಾಗಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕ್ರಾಂತಿಯಾಗಿ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿಯಾಗಲಿದೆ ಎಂದು ಹೇಳಿದರು. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಇಲ್ಲ, ಬದಲಾವಣೆಯೂ ಇಲ್ಲ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular