HomeLatest Newsಕೋಲಾರದಲ್ಲಿ ದಾರುಣ ಘಟನೆ: ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದ ಮಗನ ರಕ್ಷಿಸಲು ಹೋದ ತಾಯಿಯೂ ಸಾವು

ಕೋಲಾರದಲ್ಲಿ ದಾರುಣ ಘಟನೆ: ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದ ಮಗನ ರಕ್ಷಿಸಲು ಹೋದ ತಾಯಿಯೂ ಸಾವು

ಕೋಲಾರ: ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ, ಮಗ ಮೃತಪಟ್ಟಿದ್ದಾರೆ.

30 ವರ್ಷದ ಮಾಲಾ ಮತ್ತು ಅವರ ಪುತ್ರ ಚಕ್ರವರ್ತಿ(6) ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟವರು. ಜಾನುವಾರುಗಳಿಗೆ ಮೇವು ತರಲು ಮಾಲಾ ಹೊಲಕ್ಕೆ ತೆರಳಿದ್ದಾರೆ. ಮಗ ಚಕ್ರವರ್ತಿ ಕೂಡ ಜೊತೆಗೆ ಹೋಗಿದ್ದಾನೆ. ಈ ವೇಳೆ ಚಕ್ರವರ್ತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಧಾವಿಸಿದ ಮಾಲಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular