ಬೆಂಗಳೂರು : ಬೆಂಗಳೂರಲ್ಲಿ ಭಯಾನಕ ರೋಡ್ ರೇಜ್ ಘಟನೆಯೊಂದು ನಡೆದಿದ್ದು, ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನ ದಂಪತಿಗಳು ಹತ್ಯೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸರು ಆರೋಪಿಗಳಾದ ಮನೋಜ್, ಹಾಗೂ ಆರತಿ ಶರ್ಮಾನನ್ನು ಬಂಧಿಸಿದ್ದಾರೆ. ದರ್ಶನ್ ಎಂಬ ಯುವಕ ಮೃತಪಟ್ಟಿದ್ದಾನೆ .
ಕಾರಿನ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಸಿಟ್ಟಾದ ಮನೋಜ್, ಹಾಗೂ ಆರತಿ ಶರ್ಮಾ ದಂಪತಿ ಬೈಕ್ ಸವಾರನನ್ನು ಚೇಸ್ ಮಾಡಿಕೊಂಡು ಹೋಗಿ ಆತನಿಗೆ ಕಾರು ಗುದ್ದಿಸಿ ಎಸ್ಕೇಪ್ ಆಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಿಸದೇ ದರ್ಶನ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
