ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು-ತುಮಕೂರು ಮೆಟ್ರೋ ಸಂಚಾರ ವಿಸ್ತರಿಸಲು ಬಿಎಂಆರ್ ಸಿಎಲ್ ( BMRCL) ನಿರ್ಧರಿಸಿದೆ. ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿತ್ತು.
ಹೌದು. ಈ ವಿಸ್ತರಣೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) ನಡೆಯಲಿದ್ದು, ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಗಳೂರು ಹಾಗೂ ತುಮಕೂರಿನ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.ಈ ಬಗ್ಗೆ ನವೆಂಬರ್ ಮೊದಲ ವಾರದಲ್ಲಿ ಸರ್ಕಾರಕ್ಕೆ ಬಿಎಂಆರ್ ಸಿಲ್ ವರದಿ ಸಲ್ಲಿಸಲಿದೆ.
ಮಾದಾವರ,ಮಾಕಳಿ, ದಾಸನಪುರ,ನೆಲಮಂಗಲ,ನೆಲಮಂಗಲ ಬಸ್ ನಿಲ್ದಾಣ,ನೆಲಮಂಗಲ ರಾ.ಹೆ.,ಬೂದಿಹಾಳ,ಟಿ.ಬೇಗೂರು, ಕುಲುವನಹಳ್ಳಿ,ಸೋಂಪುರ ಕೈಗಾರಿಕಾ ಪ್ರದೇಶ,ಡಾಬಸ್‌ಪೇಟೆ,ನಲ್ಲಯ್ಯನಪಾಳ್ಯ,ಚಿಕ್ಕಹಳ್ಳಿ,ಹಿರೇಹಳ್ಳಿ,ಪಂಡಿತನಹಳ್ಳಿ,ಕ್ಯಾತ್ಸಂದ್ರ,ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ಬಸ್ ನಿಲ್ದಾಣ ಇಷ್ಟು ಸ್ಥಳಗಳು ಮೆಟ್ರೋ ನಿಲ್ದಾಣಗಳಾಗುತ್ತವೆ.
