ಕಾರಿಗೆ ಲಾರಿ ಗುದ್ದಿಸಿ ಪೆಟ್ರೋಲ್ ಬಂಕ್ ಮಾಲೀಕನ ಹತ್ಯೆಗೆ ಯತ್ನ: ತಪ್ಪಿಸಿಕೊಂಡು ಓಡಿದರೂ ಬೆನ್ನಟ್ಟಿ ಬಂದ ದುಷ್ಕರ್ಮಿಗಳು

ಕೊಡಗು: ಕಾರಿಗೆ ಲಾರಿ ಗುದ್ದಿಸಿ ಪೆಟ್ರೋಲ್ ಬಂಕ್ ಮಾಲೀಕನ ಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಪೆಟ್ರೋಲ್ ಬಂಕ್ ಮಾಲೀಕ ತೇಜಕುಮಾರ್ ಕಾರಿಗೆ ಲಾರಿ ಗುದ್ದಿಸಿ ತೇಜಕುಮಾರ್ ಕೊಲೆಗೆ ಯತ್ನಿಸಿಲಾಗಿದೆ. ಕಾರಿನ ಎದುರು ಲಾರಿ ತಂದು ಕಾರಿನ ಮೇಲೆ ಹತ್ತಿಸಲು ದುಷ್ಕರ್ಮಿಗಳು ಯತ್ನಿಸಿದದರೆ. ತೇಜಕುಮಾರ್ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಲಾರಿ ಸಮೇತ ಹಿಂಬಾಲಿಸಿಕೊಂಡು ಬಂದಿದ್ದಾರೆ. ಲಾರಿ ರಿವರ್ಸ್ ತೆಗೆದುಕೊಂಡು ತೇಜಕುಮಾರ್ ಅವರಿಗೆ ಗುದ್ದಲು ಬರುತ್ತಿದ್ದಂತೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಗೆ ಲಾರಿ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಟಿ.ರಮೇಶ್ ಹಾಗೂ ಜೆಸಿಬಿ ದಿವಾಕರ್ ಎಂಬುವವರು ತನ್ನನ್ನು ಕೊಲೆಗೈಯಲು ಯತ್ನಿಸಿದ್ದಾರೆ ಎಂದು ತೇಜಕುಮಾರ್ ಆರೋಪಿಸಿದ್ದಾರೆ. ಈ ಹಿಂದೆಯೂ ತನ್ನ ಮೇಲೆ ತಲ್ವಾರ್ ಬೀಸಿ ಹತ್ಯೆಗೆ ಯತ್ನಿಸಲಾಗಿತ್ತು ಎಂದು ದೂರು ನೀಡಿದ್ದಾರೆ. ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read