HomeKarnatakaಗಮನಿಸಿ : ರಾಜ್ಯಾದ್ಯಂತ ಅ. 24 ರಿಂದ 2 ದಿನ 'ಎಸ್ಕಾಂ' ಆನ್ ಲೈನ್ ಸೇವೆ...

ಗಮನಿಸಿ : ರಾಜ್ಯಾದ್ಯಂತ ಅ. 24 ರಿಂದ 2 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ, ಬಿಲ್ ಪಾವತಿಯೂ ಬಂದ್.!


ಬೆಂಗಳೂರು: ಅ.24 ರಿಂದ ರಾಜ್ಯದಲ್ಲಿ 2 ದಿನ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದ್ದು, ಬಿಲ್ ಪಾವತಿಯೂ ಬಂದ್ ಆಗಲಿದೆ
.

ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್ಲೈನ್ ಸೇವೆ ಅಲ್ಲಭ್ಯವಾಗಿರುತ್ತದೆ ಎಂದು ಪ್ರಕಟಣೆ ಹೊರಡಿಸಿದೆ.

ಅ.24 ರಂದು ರಾತ್ರಿಯಿಂದ 8 ಗಂಟೆಯಿಂದ 17 ಗಂಟೆಗಳ ಕಾಲ ಸೇವೆ ಲಭ್ಯವಿರುವುದಿಲ್ಲ. ಅ.24 ರಂದು ರಾತ್ರಿ 8 ಗಂಟೆಯಿಂದ ಅ.25 ರ ಮಧ್ಯಾಹ್ನ 1 ಗಂಟೆವರೆಗೆ ಐದು ಎಸ್ಕಾಂಗಳಲ್ಲಿ ಆನ್ ಲೈನ್ ಸೇವೆ ಅಲಭ್ಯವಾಗಿರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ 5 ಎಸ್ಕಾಂಗಳಲ್ಲಿ ನಗರ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಬಿಲ್ ಸೇರಿದಂತೆ ಯಾವುದೇ ಸೇವೆ ಲಭ್ಯವಿರುವುದಿಲ್ಲ.ಎಸ್ಕಾಂಗಳ ನಗರ ವ್ಯಾಪ್ತಿಯ ಗ್ರಾಹಕರಿಗೆ (ಆರ್ಎಪಿಡಿಆರ್ಪಿ) ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಮೀಟರ್ ಬದಲಾವಣೆ, ಹೊಸ ಸಂಪರ್ಕಕೆ ಅರ್ಜಿ ಸಲಿಕೆ ಸೇರಿದಂತೆ ಯಾವುದೇ ಆನ್ಲೈನ್ ಸೇವೆ ಲಭ್ಯ ಇರಲ್ಲ..ಆನ್ಲೈನ್ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸ ಸಂಪರ್ಕ ಸೇವೆ ಇರುವುದಿಲ್ಲ ಎಂದು ಹೇಳಲಾಗಿದೆ.

ಬಿಲ್ ಪಾವತಿಗಾಗಿ ಬಳಸುವ ಎಲ್ಲಾ ಎಸ್ಕಾಂಗಳ ಜಾಲತಾಣ, ಬೆಸ್ಕಾಂ ಮಿತ್ರ ಮೊಬೈಲ್ ಆಪ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೌಂಟರ್ ಗಳಲ್ಲಿ ಎರಡು ದಿನ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಅಡಚಣೆಗಾಗಿ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular