ಯಾದಗಿರಿ: ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನರ್ಸ್ ನವಜಾತ ಶಿಶುಗಳನ್ನು ಅದಲು ಬದಲು ಮಾಡಿದ ಆರೋಪ ಕೇಳಿ ಬಂದಿದೆ.
ಯಾದಗಿರಿಯ ಮಹಿಳೆಯೊಬ್ಬರು ಹೆರಿಗೆಗಾಗಿ ಯಾದಗಿರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ರಾತ್ರಿ ಹೆರಿಗೆಯಾಗಿದೆ. ಅವರಿಗೆ ಹೆಣ್ಣು ಮಗು ಜನಿಸಿದ್ದು, ಕರ್ತವ್ಯದಲ್ಲಿದ್ದ ಗೀತಾ ಎಂಬ ನರ್ಸ್ ನಿಮಗೆ ಗಂಡು ಮಗು ಜನಿಸಿದೆ ಎಂದು ತಿಳಿಸಿದ್ದರು. ಆದರೆ, ತಾಯಿ ಕಾರ್ಡ್ ನಲ್ಲಿ ಹೆಣ್ಣು ಮಗು ಎಂದು ನಮೂದು ಮಾಡಲಾಗಿತ್ತು.
ನಂತರ ಕುಟುಂಬದವರು ಜಿಲ್ಲಾ ಸರ್ಜನ್ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ. ನಂತರ ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್ ಗೀತಾ ಅವರನ್ನು ಕರೆಸಿದ ಜಿಲ್ಲಾ ಸರ್ಜನ್ ವಿಚಾರಣೆ ನಡೆಸಿದಾಗ ಅಜಾಗರೂಕತೆಯಿಂದ ಈ ರೀತಿ ಆಗಿದೆ ಎಂದು ಗೊತ್ತಾಗಿದೆ.