ಬೆಂಗಳೂರು: ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 17 ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಆದಿ ಕರ್ಮಯೋಗಿ ಅಭಿಯಾನ(AKA) ಮತ್ತು ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ(DA JGUA) ಯೋಜನೆಯ ಅನುಷ್ಠಾನದ ಸಾಧನೆಗಳನ್ನು ಗುರುತಿಸಲು “ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಸಮಾವೇಶ-2025” ಅನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯವು ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
1)ವಿಕಸಿತ ಭಾರತಕ್ಕಾಗಿ ಬುಡಕಟ್ಟುಗಳ ಸಬಲೀಕರಣ ವಿಭಾಗದಲ್ಲಿ 5 ರಾಷ್ಟ್ರೀಯ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳು:
• ಚಿಕ್ಕಬಳ್ಳಾಪುರ – DA JGUA ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ
• ಚಿಕ್ಕಬಳ್ಳಾಪುರ – ಆದಿ ಕರ್ಮಯೋಗಿ ಅಭಿಯಾನ (AKA)
• ಬೀದರ್ – ಆದಿ ಕರ್ಮಯೋಗಿ ಅಭಿಯಾನ (AKA)
• ರಾಯಚೂರು – ಆದಿ ಕರ್ಮಯೋಗಿ ಅಭಿಯಾನ (AKA)
• ಬಳ್ಳಾರಿ – ಆದಿ ಕರ್ಮಯೋಗಿ ಅಭಿಯಾನ (AKA)
2)ಧರತಿ ಅಭಾ ಜನಭಾಗೀದಾರ ಅಭಿಯಾನದಡಿಯಲ್ಲಿ ರಾಜ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಜಿಲ್ಲೆ ಚಿಕ್ಕಬಳ್ಳಾಪುರ
3)ಉತ್ತಮ ಪ್ರದರ್ಶನ ತೋರಿದ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರು ಎ. ರಾಜಶೇಖರ್, ಸಂಶೋಧನಾ ಅಧಿಕಾರಿ, ಬುಡಕಟ್ಟು ಅಭಿವೃದ್ಧಿ ಇಲಾಖೆ
ಬುಡಕಟ್ಟು ಜನಾಂಗದವರ ಏಳಿಗೆಗೆ ನಮ್ಮ ಸರ್ಕಾರದ ಸದಾ ಬದ್ಧವಾಗಿದ್ದು, ಪ್ರಶಸ್ತಿ ವಿಜೇತ ತಂಡಗಳಿಗೆ ಅಭಿನಂದನೆಗಳು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.