HomeLatest Newsಹುಲಿ ದಾಳಿಗೆ 2 ಕಣ್ಣು ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಸಂಪೂರ್ಣ ಪರಿಹಾರ : CM ಸಿದ್ದರಾಮಯ್ಯ...

ಹುಲಿ ದಾಳಿಗೆ 2 ಕಣ್ಣು ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಸಂಪೂರ್ಣ ಪರಿಹಾರ : CM ಸಿದ್ದರಾಮಯ್ಯ ಭರವಸೆ

ಬೆಂಗಳೂರು : ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಹುಲಿ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಹದೇವಗೌಡ ಅವರ ಕುಟುಂಬದವರ ಜೊತೆ ಚರ್ಚಿಸಿ, ಮಾತನಾಡಿದರು.

ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗುವುದು. ಎರಡು ಕಣ್ಣುಗಳ ದೃಷ್ಟಿ ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಓರ್ವ ಗಾಯಾಳು ಎಂದು ಪರಿಗಣಿಸದೆ ಬದುಕು ಕಳೆದುಕೊಂಡ, ಕುಟುಂಬದ ಆಸರೆ ಕಳೆದುಕೊಂಡವರ ಬಗ್ಗೆ ಆಲೋಚಿಸಿ ಪೂರ್ತಿ ಪರಿಹಾರ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular